ಇಂಗ್ಲೆಂಡ್ ನಲ್ಲಿ ಹುಟ್ಟಿದ ಈ ಆಕ್ಟೋಪಸ್, ಜರ್ಮನಿನ ಸೀ ಲೈಫ್ ಅಕ್ವೇರಿಯಂನಲ್ಲಿತ್ತು. ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಎಂಟು ಪಂದ್ಯಗಳ ನಿಖರ ಭವಿಷ್ಯ ಹೇಳಿ ಸ್ಟಾರ್ ಪಟ್ಟ ಪಡೆದಿದ್ದ ಆಕ್ಟೋಪಸ್ ಪಾಲ್ ಜರ್ಮನಿಯ ಓಬೆರ್ಹಾಸನ್‌ನ ಅಕ್ವೇರಿಯಂನಲ್ಲಿ ಮಂಗಳವಾರ ಸಾವನ್ನಪ್ಪಿದೆ. == ಫೀಫಾ ವಿಶ್ವಕಪ್ ೨೦೧೦ == ಫೀಫಾ ವಿಶ್ವಕಪ್ 2010 ಕಾಲ್ಚೆಂಡಾಟವನ್ನು ಅದ್ಭುತವಾಗಿ ಆಡಿದವರು ಯಾರು ಎಂಬ ಪ್ರಶ್ನೆಗೆ ಎಂಟು ಕಾಲುಗಳ ಜೀವಿ ಪೌಲ್ ಎಂಬ ಜಾಣತನದ ಉತ್ತರ ಸಿಗುತ್ತಿತ್ತು. ಏಕೆಂದರೆ ಪೌಲ್ ಸೂಚಿಸಿದ ಭವಿಷ್ಯ ನೂರರಷ್ಟು ನೂರರಷ್ಟು ನಿಜವಾಗಿತ್ತು. ಅಂತಿಮ ಹಣಾಹಣಿಯಲ್ಲಿ ಹಾಲೆಂಡ್ ಅನ್ನು ಮಣಿಸಿ ಸ್ಪೇನ್ ಕಪ್ ಎತ್ತಲಿದೆ ಎಂದು ಪೌಲ್ ಸೂಚಿಸಿದಂತೆ ನಡೆಯಿತು. ತನ್ನಷ್ಟಕ್ಕೆ ತಾನು ಪಶ್ಚಿಮ ಜರ್ಮನಿಯ ಸೀ ಲೈಫ್ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೌಲ್ ಇಡೀ ವಿಶ್ವದ ಗಮನ ಸೆಳೆದಿತ್ತು. == ಭವಿಷ್ಯ ಹೇಳುತ್ತಿದ್ದ ಪರಿ == ಕಪ್ಪೆಚಿಪ್ಪಿನ ಆಹಾರ ಹೊಂದಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ನ ಮುಂದಿರಿಸಲಾಗುತ್ತಿತ್ತು. ಈ ಡಬ್ಬಿಗೆ ಜರ್ಮನ್ ಹಾಗೂ ಎದುರಾಳಿ ತಂಡದ ಬಾವುಟವನ್ನು ಹೊದೆಸಿರಲಾಗುತ್ತದೆ. ಪೌಲ್ ಇರುವ ನೀರಿನ ಜಾಡಿಯಲ್ಲಿ ಈ ಎರಡು ಡಬ್ಬಿಯನ್ನು ಇಳಿಬಿಡಲಾಗುತ್ತದೆ. ಯಾವ ಡಬ್ಬಿಯಲ್ಲಿನ ಆಹಾರವನ್ನು ಪೌಲ್ ಸೇವಿಸುತ್ತಾನೋ ಆ ತಂಡ ವಿಜಯಿಯಾಗುತ್ತದೆ ಎಂದು ತಿಳಿಯಲಾಗುತ್ತದೆ. == ಗೌರವ == ಪ್ರತ್ಯೇಕವಾಗಿ ಅಂತಿಮ ಸಂಸ್ಕಾರ ವಿಧಿ ನೆರವೇರಿಸಿ, ಸ್ಮಾರಕ ಸ್ಥಾಪಿಸಲು ಸೀ ಲೈಫ್ ಕೇಂದ್ರ ಸಜ್ಜಾಗಿದೆ. ಮುಂದಿನ ವರ್ಷ ಭವಿಷ್ಯಗಾರ ಆಕ್ಟೋಪಸ್ ಪೌಲ್ ಕುರಿತ ಕಿರುಚಿತ್ರ ಕೂಡಾ ತೆರೆ ಕಾಣಲಿದೆ. [೧] == ಜಾಹಿರಾತಿನಲ್ಲಿ ಪೌಲ್ == ಪೌಲ್ ಆಕ್ಟೋಪಸ್ ಜರ್ಮನಿಯ ಸೂಪರ್ ಮಾರ್ಕೆಟ್ ರೆವೆಯ ಬ್ರಾಂಡ್ ಜಾಹೀರಾತು ಜಗತ್ತಿನಲ್ಲಿ ಕಾಣಿಸಿಕೊಂಡಿದೆ.[೨] === ಜರ್ಮನಿಯ ಫಲಿತಾಂಶಗಳು === ಯುರೊ ೨೦೦೮ ಫೀಫಾ ವಿಶ್ವಕಪ್ ೨೦೧೦ == ಉಲ್ಲೇಖಗಳು ==